Punar Nirmana

ತನ್ನ ಪ್ರಾಚೀನ ಪುರಾಣ ಐತಿಹ್ಯದೊಂದಿಗೆ ಧಾರ್ಮಿಕ ಸಂಸ್ಕøತಿಯನ್ನು ಸಾರುವ ನವ್ಮಿೂೀ ದೇವಾಲಯದ ಗೋಪುರವು ಅಜೀರ್ಣಾವಸ್ಥೆಗೆ ತಲುಪಿದ್ದು, ದೇವಸ್ಥಾನದ ನವೀಕರಣ ಸಂಬಂಧ ನಡೆಸಿದ ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ವಾಸ್ತು ಸಹಿತ ನವೀಕರಣ ಕಾರ್ಯ ಕೈಗೊಳ್ಳಬೇಕಾಗಿದೆ ಎಂದು ಕಂಡು ಬಂದಿದೆ. ಹಾಗೂ ಶ್ರೀ ಕ್ಷೇತ್ರವನ್ನು ಸಂದರ್ಶಿಸುವ ಭಕ್ತಾದಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದ್ದು ಪ್ರಸ್ತುತ ಇರುವ ದೇವಸ್ಥಾನದಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಇರುವುದರಿಂದ ಭಕ್ತರ ಮೂಲಭೂತ ಸೌಕರ್ಯದ ಅನುಕೂಲಕ್ಕಾಗಿ ಸುಮಾರು 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಣ ಗೊಳಿಸುವ ಸಂಕಲ್ಪದೊಂದಿಗೆ, ಆಡಳಿತ ಸಮಿತಿಯ ನೆರವಿನಿಂದ ನವೀಕರಣ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ. ಶ್ರೀ ಕ್ಷೇತ್ರದ ನವೀಕರಣ ಕಾರ್ಯಕ್ಕೆ ಶ್ರೀ ಮಾತೆಯ ಭಕ್ತರಾದ ತಾವು ನಮ್ಮ ಗಳಿಕೆಯಲ್ಲಿ “ತಾನು ತನ್ನವರಿಗೆ ಸಾಕಾಷ್ಟು, ಸಮಾಜಕ್ಕೆ ಸರ್ವಸ್ವ” ಇದೇ ಧರ್ಮ ಜೀವನವನ್ನು ಎಂಬ ಭಾವನೆಯೊಂದಿಗೆ ನಮ್ಮೀ ಅಪೂರ್ವ ಪುಣ್ಯ ಕಾರ್ಯ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ತಮ್ಮೆಲ್ಲರ ತ್ರಿಕರಣ ಪೂರ್ವಕ ಸಹಕಾರವನ್ನು ನೀಡುವುದರ ಮೂಲಕ ಶ್ರೀ ದುರ್ಗಾಪರಮೇಶ್ವರಿ, ಪಂಜುರ್ಲಿಯ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ
ಗೌರವ ಪೂರ್ವಕ ವಂದನೆಗಳೊಂದಿಗೆ,
ಅಧ್ಯಕ್ಷರು ಮತ್ತು ಸರ್ವಸದಸ್ಯರು ಅರ್ಚಕರು ಅಧ್ಯಕ್ಷರು ಮತ್ತು ಸರ್ವಸದಸ್ಯರು
ನವೀಕರಣ ಸಮಿತಿ ಶ್ರೀ ಕ್ಷೇತ್ರ ಆಡಳಿತ ಸಮಿತಿ ಹಾಗೂ ಮಹಿಳಾ ಸಮಿತಿಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಡಿ ಬೆಂಗ್ರೆ
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
ಕೋಡಿ ಬೆಂಗ್ರೆ-576218, ಉಡುಪಿ ಜಿಲ್ಲೆ.
ಮೊಬೈಲ್ : 9880846410 / 8694911766 / 7760307250 / 9900957501
ಇಮೇಲ್ : durgaparameshwarikb@gmail.com